ಅರ್ಕಾವತಿ ನದಿ ಪುನಶ್ಚೇತನ ಕಾಮಗಾರಿಯ ಪರೀಕ್ಷಾ ವರದಿ
ಸತತ ಹಲವಾರು ವರ್ಷಗಳ ಜನರ ಹೋರಾಟದ ಫಲವಾಗಿ ಕರ್ನಾಟಕ ಸರ್ಕಾರ ಕಡೆಗೂ ಎಚ್ಚೆತ್ತು 2012.13ನೇ ಸಾಲಿನಲ್ಲಿ ಕಾವೇರಿ ನೀರಾವರಿ ನಿಗಮದ ಮೂಲಕ 22.43 ಕೋಟಿ ರೂ ವೆಚ್ಚದ ಟೆಂಡರ್ ಕರೆದು ಅರ್ಕಾವತಿ ನದಿ ಪುನಶ್ಚೇತನ ಯೋಜನೆಯನ್ನು 3 ಹಂತಗಳಾಗಿ ವಿಭಜಿಸಿ ಜಾರಿ ಮಾಡಿದೆ.
ಮೊದಲ ಹಂತ ನಂದಿ ಬೆಟ್ಟದಿಂದ ಹೆಸರಘಟ್ಟ ಕೆರೆಯವರೆಗೂ 8.10. ಕೋಟಿ ಎರಡನೇ ಹಂತ ಕುಮುದ್ವತಿ ಉಗಮ ಸ್ಥಾನದಿಂದ ತಿಪ್ಪಗೊಂಡನಹಳ್ಳಿಯವರೆಗೂ7.85 ಕೋಟಿ, ಮೂರನೇ ಹಂತ ಹೆಸರಘಟ್ಟದಿಂದ ತಿಪ್ಪಗೊಂಡನಹಳ್ಳಿಯವರೆಗೂ 6.85ಕೋಟಿ ಈ ಯೋಜನೆಯು ಪ್ರಮುಖವಾಗಿ 400 ಕೆರೆಗಳ ರಾಜಕಾಲುವೆಗಳ ಮತ್ತು ಕೋಡಿ ಕಾಲುವೆಗಳ ಹೂಳುತೆಗೆದು ಕೆರೆಗಳಿಗೆ ಸರಾಗವಾಗಿ ನೀರು ಹರಿದುಬಂದು ಹೆಸರಘಟ್ಟ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯಗಳಿಗೆ ನೀರು ಬಬೇಕೆಂಬ ಆಶಯವನ್ನು ಹೊಂದಿದೆ.
ಆದರೆ ಎಷ್ಟೇ ಒಳ್ಳೆಯ ಆಶಯಗಳನ್ನು ಹೊಂದಿದ್ದರೂ ಕಾಮಗಾರಿಗಳು ಸಂಪೂರ್ಣ ಯಶಸ್ವಿಯಾಗದ ಹೊರತು ಪುನಶ್ಚೇತನ ಸಾಧ್ಯವಿಲ್ಲ. ಹಾಗಾಗಿ ಈ ಯೋಜನೆಗೆ ಸ್ಥಳೀಯರ ಬೆಂಬಲ ಸಿಗುವಂತಾಗಬೇಕೆಂದು ನಿಗಮದಿಂದ ಅಂದಾಜು ಮೊತ್ತದ ಪ್ರತಿ ಪಡೆದು ಕರಪತ್ರಗಳನ್ನು ದಾನಿಗಳ ನೆರವಿನಿಂದ ಮುದ್ರಿಸಿ ಮೊದಲ ಹಂತದ ಹಳ್ಳಿಗಳಿಗೆ ಹಂಚಿದ್ದು ಆಗಿತ್ತು,
ಕರಪತ್ರ ತಲುಪಿದ ಹಳ್ಳಿಗಳಿಂದ ಕಾಮಗಾರಿಯ ಗುಣಮಟ್ಟದ ಬಗ್ಗೆ ಅಸಮದಾನ ಹೊಂದಿದ್ದ ಸಮುದಾಯ ಪ್ರತಿನಿಧಿಗಳ ಕರೆಗಳು ಬರಲಾರಂಭಿಸಿದವು, ಹಾಗಾಗಿ ಸಮುದಾಯದವರ ಜೊತೆ ಒಂದು ಕಾಮಗಾರಿಯ ಗುಣಮಟ್ಟದ ಪರೀಕ್ಷಾ ಮಾಡುವ ಅನ್ನೋ ನಿರ್ಧಾರಕ್ಕೆ ಸಮಿತಿ ಬಂತು, ಇದರ ಬೆನ್ನಲ್ಲೇ ಹಲವಾರು ಕಡೆ ನೋಡಿದಾಗ ಗುಣಮಟ್ಟದಲ್ಲಿ ಕೊರತೆ ಕಾಣಿಸಿತು.
ನಾವೆ ಟೇಪ್ ಹಿಡಿದು ಅಳತೆ ಮಾಡಿದಾಗ 4ಮೀಟರ್ ಅಗಲದಲ್ಲಿ ಎರಡೂ ಕಡೆ ಲೆಕ್ಕ ಹಾಕಿದ್ರು ಎರಡು ಅಡಿ ಮಾತ್ರ ಮಣ್ಣು ಹೊರಗೆ ಹಾಕಿದ್ರು ಇವುಗಳ ಆಧಾರದಲ್ಲಿ ಇಡೀ ಆ ಸ್ಥಳದ ಕಾಮಗಾರಿಯ ಗುಣಮಟ್ಟ ಬರಿ 12 % 20% ಅಷ್ಟೆ ಆಗಿತ್ತು , ಆಗ ಗೋಪಾಲ್ ಇನ್ನೂ ಈ ಸ್ಥಳದಲ್ಲಿ ಕಾಮಗಾರಿ ಬಾಕಿ ಇದೆ ಅಂತಂದ್ರು, ಆಗ ಅಲ್ಲೇ ಇದ್ದ ಸಿಪಿಎಂ ನ ಚಂದ್ರ ತೇಜಸ್ವಿಯವರು ಕಡೆಗೆ ಇದು ಆಗುವ ಹೋಗುವ ಕೆಲಸ ಅಲ್ಲ ಹಾಗಾಗಿ ಕಾವೇರಿ ನೀರಾವರಿ ನಿಗಮದ ಕೇಂದ್ರ ಕಛೇರಿಗೆ ಭೇಟಿ ನೀಡಿ ವ್ಯವಸ್ಥಾಪಕ ನಿರ್ಧೇಶಕರ ಜೊತೆ ಮಾತಾಡುವ ಅಂದ್ರು
ಅದಕ್ಕೆ ಗೋಪಾಲ್ ಸಹ ನಮ್ಮ ಬಳಿ ಇರೋದು ಇಷ್ಟೆ ದಾಖಲೆಗಳು ಹಾಗಾಗಿ ಇನ್ನುಳಿದ ದಾಖಲೆಗಳನ್ನು ನಿಗಮದಿಂದ ಪಡೆದುಕೊಳ್ಳಿ ಅಂತ ಅಂದ್ರು
ಅದಕ್ಕೆ ಸಮಿತಿಯ ಕಾರ್ಯದರ್ಶಿ ಸೀತಾರಾಂ ವ್ಯವಸ್ಥಾಪಕ ನಿರ್ಧೇಶಕರನ್ನು ಸಂಪರ್ಕ ಮಾಡಿ ಸಭೆ ಕರೆಯುವಂತೆ ಮತ್ತು ಅಂದು ಅಗತ್ಯ ದಾಖಲೆಗಳು ಮತ್ತು ಅಧಿಕಾರಿಗಳ ಹಾಜರಿಯನ್ನು ಕೋರಲಾಗಿದೆ
ಇದಕ್ಕೆ ಪೂರಕವಾಗಿ ಪ್ರತಿಕ್ರಿಯೆ ನೀಡಿದ ನಿರ್ಧೇಶಕರು ದಿನಾಂಕ 7.01.2013ರಂದು ಕಾವೇರಿ ನೀರಾವರಿ ನಿಗಮದ ಕೇಂದ್ರ ಕಛೇರಿಯಲ್ಲಿ ಸಭೆ ಕರೆದಿದ್ದರು ಅದರಲ್ಲಿ ಆದದ್ದು ಮುಂದಿನ ಪೋಸ್ಟ್ನಲ್ಲಿ ಹಾಕ್ತೀನಿ
Manjunatha G Arkavathi Volunteer